ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಸಾವಿರ ಯಕ್ಷಗಾನ ಪುಸ್ತಕಗಳ ಸರದಾರ

ಲೇಖಕರು : ಚಂದ್ರಶೇಖರ ಎಸ್ ಅಂತರ
ಗುರುವಾರ, ಜುಲೈ 18 , 2013

`
ಅವರಿಗೆ ಯಕ್ಷಗಾನ ತಾಳ ಮದ್ದಳೆ ಎಂದರೆ ಅಪಾರ ಪ್ರೀತಿ. ಚಿಕ್ಕ ವಯಸ್ಸಿನಿಂದಲೇ ತನ್ನ ಗಮನ ಅದರತ್ತ ಹರಿಸಿದ್ದರು. ಕರಾವಳಿ ಗಂಡು ಕಲೆ ಯಕ್ಷಗಾನ, ತಾಳಮದ್ದಳೆ ಕಲಿಯಬೇಕೆಂದು ಪಣ ತೊಟ್ಟರು. ಕಲಿಕೆಗಾಗಿ ರಾತ್ರಿ ಹಗಲು ಪರಿಶ್ರಮ ಪಟ್ಟರು. ಸಾವಿರಾರು ಪುಸ್ತಕಗಳ ಸಂಗ್ರಹಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾದರು. ಇದರ ಪರಿಣಾಮವೆಂಬಂತೆ ಅವರ ಮನೆಯ ಒಂದು ಕೊಠಡಿ ಯಕ್ಷಗಾನದ ಸಣ್ಣ ಗ್ರಂಥಾಲಯವಾಗಿ ಮಾರ್ಪಾಡಾಗಿದೆ.

ಚಿಕ್ಕ ವಯಸ್ಸಿನಲ್ಲಿ ಯಕ್ಷಗಾನದ ವೇಷ ಭೂಷಣ ಹಾಗು ತಾಳಮದ್ದಳೆಯ ಮಾತುಗಾರಿಕೆಗೆ ಮನಸೋತು ಅದನ್ನು ಕರಗತ ಮಾಡುವ ನಿಟ್ಟಿನಲ್ಲಿ ಸಾವಿರ ಪುಸ್ತಕಗಳ ಖರೀದಿಸಿ ಶ್ರಮವಹಿಸಿ ಅಭ್ಯಾಸಿಸಿ ಯಶಸ್ವಿಯಾದ ಯಕ್ಷಪ್ರತಿಭೆ ಮಂಜುನಾಥ್ ಭಟ್ ಅಂತರ. ಅವರು ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಸಮೀಪವಿರುವ ಮಾಲಾಡಿಯರು.

ವೃತ್ತಿಯಲ್ಲಿ ಬೆಳ್ತಂಗಡಿಯ ಚರ್ಚ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆಸಲ್ಲಿಸುತ್ತಿರುವ ಮಂಜುನಾಥ್ ಭಟ್ ಪ್ರವೃತ್ತಿಯನ್ನಾಗಿ ತಾಳಮದ್ದಳೆಯ ಪಾತ್ರದಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಯಕ್ಷಗಾನದ ಒಂದು ಪ್ರಕಾರವಾಗಿರುವ ತಾಳ ಮದ್ದಳೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿ ತನ್ನ ಹನ್ನೆರಡನೇ ವಯಸ್ಸಿನಲ್ಲೇ ತಾಳಮದ್ದಳೆಯಲ್ಲಿ ಮಾತುಗಾರನಾಗಿ ಕಲಾ ವೃತ್ತಿ ಆರಂಬಿಸಿ ಮಾತಿನ ಮಲ್ಲರಾದರು. ವಿವಿಧ ಅರ್ಥ ನೀಡುವ ಮಾತುಗಾರಿಕೆಗೆ ತಾಳಮದ್ದಳೆ ಹೆಸರುವಾಸಿ. ಅಂತಹ ಮಾತಿನ ಚಟಾಕಿ ಹಾರಿಸಿ ವೀಕ್ಷಕರಿಗೆ ರಂಜಿಸಿ ತಾಳಮದ್ದಳೆಯಲ್ಲಿ ಮಾತೇ ಬಂಡವಾಳ ಎಂದು ನಿರೂಪಿಸಿದರು. ಯಕ್ಷಗಾನದಲ್ಲೂ ಭಾಗವತರಾಗಿ ಕಾಣಿಸಿಕೊಂಡರು. ಚೆಂಡೆ ತಾಳ ಮದ್ದಳೆ ಬಾರಿಸುವುದನ್ನು ಕಲಿತರು. ಹೀಗೆ ಅನೇಕ ಕಲಾ ಪ್ರಕಾರ ಒಳಗೊಂಡಿರುವ ಯಕ್ಷಗಾನ-ತಾಳಮದ್ದಳೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಪ್ರವೀಣನೆನಿಸಿಕೊಂಡರು.

ನಾನು ಸ್ವ ಇಚ್ಛೆಯಿಂದ ಸಾವಿರಾರು ರೂಪಾಯಿ ವ್ಯಯಿಸಿ ಯಕ್ಷಗಾನ ಹಗೂ ಅದರ ವಿವಿಧ ಪ್ರಭೇದಗಳ ಕುರಿತಾದ ಸುಮಾರು 1000 ಪುಸ್ತಕಗಳನ್ನು ಸಂಗ್ರಹಿಸಿದ್ದೇನೆ. ಯಕ್ಷಗಾನದ ಕುರಿತಾಗಿ ಇನ್ನಷ್ಟು ಕಲಿಯುವ ಹಂಬಲ ನನಗಿದೆ. ನನ್ನ ಸಂಗ್ರಹಣೆಗೆ ಬೆಂಬಲವಾದದ್ದು ನನ್ನ ಮಿತ್ರರಾದ ಸುಬ್ರಹ್ಮಣ್ಯ ಅಧಿಕಾರಿ, ಶಿವ ಅಣ್ಣ ಹಾಗೂ ರಾಮ್ಚಂದ್ರ ಭಟ್. ನನ್ನ ಎಲ್ಲಾ ಸಾಧನೆಗೆ ಸ್ಪೂರ್ತಿ ನೀಡಿದ್ದು ಶ್ರೇಷ್ಠ ಮದ್ದಳೆ ಹಾಗೂ ಚೆಂಡೆ ವಾದಕ ಕಡಬ ನಾರಾಯಣ ಆಚಾರ್ಯ ಎಂದು ತನ್ನ ಸಾಧನೆಗೆ ದಾರಿ ದೀಪವಾದವರನ್ನು ಸ್ಮರಿಸುತ್ತಾರೆ ಮಂಜುನಾಥ್ ಭಟ್.

ತಾಳಮದ್ದಳೆಯ ನಂಟನ್ನು ಕಳೆದುಕೊಳ್ಳಬಾರದು ಎಂಬ ಕಾರಣಕ್ಕೆ ಪ್ರವೃತ್ತಿಯಾಗಿ ಪಾತ್ರಧಾರಿಯಾಗಿ ನಟಿಸುತ್ತಿರುವ ಅವರು ಶಿಕ್ಷಕರಾಗಿ ನಿವೃತ್ತಿ ಹೊಂದಿದ ಬಳಿಕ ಪರಿಪೂರ್ಣ ಕಲಾವಿದನಾಗುವ ಬಯಕೆ ಹೊಂದಿದ್ದಾರೆ. ಯಕ್ಷಗಾನ ತಾಳಮದ್ದಳೆ ಮಾತ್ರವಲ್ಲದೆ ಬರವಣಿಗೆಯಲ್ಲೂ ತನ್ನ ಪಕ್ವತೆಯನ್ನು ನಿರೂಪಿಸಿದ್ದಾರೆ. ನಾಟಕ, ಪ್ರಹಸನಗಳನ್ನು ಪ್ರತಿಭಾ ಕಾರಂಜಿಗೆ ವಿದ್ಯಾಥರ್ಿಗಳಿಗಾಗಿ ರಚಿಸಿದ್ದಾರೆ. ಅವರು ರೂಪಿಸಿದ ಕೆಲ ನಾಟಕಗಳು ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿಗಳಿಸಿದೆ.

ಜೋತಿಷ್ಯ ಶಾಸ್ತ್ರ, ಅಷ್ಟಮಂಗಳ, ವಾಸ್ತು ನೋಡುವ ವಿದ್ಯೆಯ ಕುರಿತಾಗಿ ಜ್ಞಾನ ಸಂಪಾದಿಸಿರುವ ಮಂಜುನಾಥ್ ಭಟ್, ಮಡಂತ್ಯಾರು ಹಾಗೂ ಸುತ್ತಮತ್ತಲಿನಲ್ಲಿ ಖ್ಯಾತ ಜ್ಯೋತಿಶಿಯಾಗಿ ಹೆಸರು ಪಡೆದಿದ್ದಾರೆ. ಹಲವು ದೇವಸ್ಥಾನಗಳಿಗೆ ವಾಸ್ತು ಹೇಳಿರುವ ಇವರಿಗೆ ಮಾಲಾಡಿಯ ಸಮೀಪದ ನವುಂಡ ನಾಗಬ್ರಹ್ಮ ದೇವಸ್ಥಾನದ ಬ್ರಹ್ಮಹಲಶೋತ್ಸವದ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಸನ್ಮಾನಿತರಾಗಿದ್ದರು. ಅನೇಕ ವಿಷಯಗಳ ಕುರಿತು ಜ್ಞಾನ ಸಂಪಾದಿಸಿರುವ ಮಂಜುನಾಥ್ ಭಟ್ ಕಲೆ ಸಾಹಿತ್ಯದ ಕುರಿತು ಆಸಕ್ತಿ ಹೊಂದಿದ್ದಾರೆ ಇವರ ಆಸಕ್ತಿ ಇನ್ನಷ್ಟು ಹೆಚ್ಚಲಿ. ಅಳಿವಿನಂಚಿನಲ್ಲಿರುವ ತಾಳಮದ್ದಳೆ ಕಲೆ ಕುರಿತಾಗಿ ಇತರರಿಗೆ ತಿಳಿ ಹೇಳಲಿ. ನಶಿಸಿ ಹೋಗುತ್ತಿರುವ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಯುವ ಪೀಳಿಗೆಗೆ ಪ್ರೋತ್ಸಾಹದ ಚಿರುಮೆಯಾಗಲಿ.



ಕೃಪೆ : http://www.nammabedra.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ